ಪ್ರಕಾಶ್ ಬೆಳವಾಡಿ ಒರ್ವ ಭಾರತೀಯ ರಂಗಭೂಮಿ, ಚಲನಚಿತ್ರ, ದೂರದರ್ಶನ ಕಲಾವಿದರು ಮತ್ತು ಪತ್ರಕರ್ತರು. ಅವರು ಬೆಂಗಳೂರಿನ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾದ ಸಹ ಸಂಸ್ಥಾಪಕರು. ಸಾಮಾಜಿಕ ಕಳಕಳಿ ಉಳ್ಳವರು ಮತ್ತು ಹೋರಾಟಗಾರರು. == ಆರಂಭಿಕ ಜೀವನ == ಪ್ರಕಾಶ್ ಬೆಳವಾಡಿ ಅವರು ರಂಗಭೂಮಿ ಕಲಾವಿದರ ಕುಟುಂಬದಲ್ಲಿ ಜನಿಸಿದವರು. ಆವರ ತಂದೆ ಬೆಳವಾಡಿ ನಂಜುಂಡಯ್ಯ ನಾರಾಯಣ(1929–2003) ಕನ್ನಡ ರಂಗಭೂಮಿ ಕಲಾವಿದರು. ಕೆಲವು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮೇಕಪ್ ಮಾನ್ ಆಗಿಯು ಕೆಲಸ ನಿರ್ವಹಿಸುತ್ತಿದ್ದ ಇವರು ಮೇಕಪ್ ನಾಣಿ ಎಂದು ಜನಪ್ರಿಯವಾಗಿದ್ದರು. ಅವರ ತಾಯಿ ಭಾರ್ಗವಿ ಕೂಡ ರಂಗಭೂಮಿ ಕಲಾವಿದರು. ಅವರ ಒಡಹುಟ್ಟಿದವರಾದ ಸುಜಾತ, ಸುಧಾ ಹಾಗು ಪ್ರದೀಪ್ ಕೂಡ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ . ಪ್ರಕಾಶ್ ಅವರು ಮಹಿಳಾ ಸೇವಾ ಸಮಾಜದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ನ್ಯಾಷನಲ್ ಹೈಸ್ಕೂಲ್ನಲ್ಲಿ ಪ್ರೌಡ ಶಿಕ್ಷಣ ಮುಗಿಸಿದರು. ಅವರು ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ತಮ್ಮ ಪದವಿಪೂರ್ವ ಕೋರ್ಸ್ ಪೂರ್ಣಗೊಳಿಸಿದರು. ಯುವಿಸಿಇ ಯಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ . == ಚಲನಚಿತ್ರಗಳ ಪಟ್ಟಿ == === ಚಲನಚಿತ್ರಗಳು === ==== ನಟನಾಗಿ ==== ==== ನಿರ್ದೇಶಕರಾಗಿ ==== ಸ್ಟಂಬಲ್ (2003) === ಧಾರಾವಾಹಿ === ಗರ್ವ (2001) ಇಲ್ಲಿರುವುದು ಸುಮ್ಮನೆ (2008) == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಪ್ರಕಾಶ್ ಬೆಳವಾಡಿ ಐ ಎಮ್ ಡಿ ಬಿನಲ್ಲಿ ವೀಕೆಂಡ್ ವಿತ್ ರಮೇಶ್, ೪ ರ, ೪ ನೇ ಅತಿಥಿ ಪ್ರಕಾಶ್ ಬೆಳವಾಡಿ , () , ,03, 2019- ..